ಕೄಷಿ

Monday, May 10, 2010

ಕಾಡ ನೋಡ ಹೋದೆ.......

ಕಳೆದ ಒಂದು ತಿಂಗಳಂದ ಜರ್ಮನಿಯ ಕಾಡನ್ನು ಸುತ್ತಾಡುತ್ತಿದ್ದೇನೆ. ಉತ್ತರ ಭಾಗದ ಹಲವಾರು ನ್ಯಾಶನಲ್ ಪಾರ್ಕ್ ಮತ್ತು ನಿಸರ್ಗ ಸಂರಕ್ಸಿತ ಪ್ರದೇಶಗಳನ್ನು ಸುತ್ತಿದ್ದೇನೆ.



ಛಳಿಗಾಲದಲ್ಲಿ ಎಲೆ ಉದುರಿಸಿ, ಭರಡಾಗಿದ್ದ ಕಾಡಿಗೆ, ಛಳಿಗಾಲ ಮುಗಿಯುತ್ತದ್ದ ಹಾಗೆ ವಸಂತದ ಜೀವನೋತ್ಸಾಹ! ಎಲ್ಲೆಡೆ ಹಸಿರು.

ನೆಲವೆಲ್ಲ ಆವರಿಸಿದ್ದ ಹಿಮ ಕರಗಿದ ಮೇಲೆ ಎಲೆ ಉದುರಿದ ಕಾಡಿನಲ್ಲಿ, ಎಲ್ಲ ಭಣ ಭಣ.



ಅಪರೂಪಕ್ಕೆ ಕಂಡ ಸೂರ್ಯ ರಶ್ಮಿ ನೆಲದೊಳಗಿನ ಗಡ್ಡೆಗಳಿಗೆಲ್ಲ ಜೀವ ಬರುತ್ತದೆ.

ವರ್ಷವೆಲ್ಲ ಅಡಗಿ ಕುಳಿತ ಬೇಸರವ ಮರೆಯಲು, ಒಮ್ಮೆಲೆ ಚಿಗುರಿದ ಉತ್ಸಾಹ. ಕಾಡು ಮರಗಳು ಎಲೆ ಚಿಗಿರುವ ಮೊದಲೇ ತಮ್ಮ ಬದುಕನ್ನು ಕಂಡುಕೊಳ್ಳಬೇಕು. ಎಲೆ ಚಿಗಿರಿದ ಮೇಲೆ ಮತ್ತೆ ಕತ್ತಲು, ಸೂರ್ಯ ಕಾಣುವುದಿಲ್ಲ. ಬಾಳು ಬೆಳಗುವಿದಿಲ್ಲ. ಅದಕ್ಕೇ ಇರಬೇಕು , ಎಷ್ಟೊಂದು ಉತ್ಸಾಹ ನೋಡಿ! ಮೊನ್ನೆ ಮೊನ್ನೆಯ ವರೆಗೆ ಹಿಮ ತುಂಬಿದ್ದ ಕಾಡಿನಲ್ಲಿ, ಹಿಮ ಕರಗುತ್ತಿದ್ದ ಹಾಗೆ, ಇಂದು ಎಷ್ಟೊದು ಹೂವುಗಳು!


ಕಾಡು ಬದಲಾಗುವ ಪರಿ ಎಂಥ ಸೋಜಿಗ! ಅದೇ ಉತ್ಸಾಹದಲ್ಲಿ ಸುತ್ತುದ್ದೇನೆ. ನಿತ್ಯ ಹರಿದ್ವರ್ಣ ಕಾಡಿನಲ್ಲಿ ಹುಟ್ಟಿ ಬೆಳೆದ ನನಗೆ, ವಸಂತನ ಆಗಮನದ ಸಂಭ್ರಮ ಅಷ್ಟಾಗಿ ಗೊತ್ತಿಲ್ಲ. ಅಲ್ಲಿ ನಿತ್ಯ ವಸಂತ! ಇಲ್ಲಿ ಬದಲಾವಣೆ ನಿರಂತರ.




ನಿತ್ತ ಹರದ್ದ್ವರ್ಣ ಕಾಡಿನಲ್ಲಿ ವರ್ಷವೆಲ್ಲ ಬದುಕು; ಹಾಗಾಗಿ ಬದುಕಿಗಾಗಿ ಹೊರಾಟ. ತಾ ಮುಂದು ತಾ ಮುಂದು ಎಂದು ಎತ್ತರ ಬೆಳೆಯುವ ಸ್ಪರ್ಧೆ. ಇಲ್ಲಿ, ಬೆಳಕಿಗೇ ತತ್ವಾರ. ಬಂದಾಗ ಸಂಭ್ರಮ; ಜನರಿಗೆ ಮಾತ್ರವಲ್ಲ. ಸಸ್ಯಗಳಿಗೆ ಕೂಡ.



ಐದು ತಿಂಗಳು ಬದುಕು ಸಾದ್ಯವಿಲ್ಲವೆಂದು ನೆಲದಲ್ಲಿ ಅಡಗಿ ಕುಳಿತ ಸಸ್ಯಗಳೆಲ್ಲ ಮೊದಲ ತಲೆ ಹೊರ ಚಾಚಲು ಪ್ರಾರಭ. ಸ್ವಾಗತಕ್ಕೆ ಎಷ್ಟೋಂದು ಅಲಂಕಾರ?




ನೀ ಬರೋ ಹಾದಿಯಲಿಹಾಸಿಹೆ ಹೂವಿನಲಿ.




ಇಂತದೇ ಚಿತ್ರಗಳ ರಾಶಿ ಬಿದ್ದಿದೆ, ನನ್ನ ಕಂಪ್ಯೂಟರಿನ ಫೋಲ್ಡರಿನಲ್ಲಿ. ಯಾವುದನ್ನು ಆಯಲಿ, ಯಾವುದನ್ನ ಬಿಡಲಿ?



ಇನ್ನಷ್ಟು ಚಿತ್ರಗಳು, ಬರಹಕ್ಕೆ ಸೇರಿಸುತ್ತೇನೆ. ಇನ್ನೊಂದೆರಡು ದಿನಗಳಲ್ಲಿ.