ಕೄಷಿ

Sunday, January 3, 2010

ಹಿಮದ ಹಾದಿಯಲ್ಲಿ ...............


ಖಂಡಿತವಾಗಿಯೂ ಅದು ನನ್ನ ಜೀವನದ ಅತ್ಯಂತ ಛಳಿಯ ದಿನ!



ನಾನು ನಡುಗುವುದನ್ನು ನೋಡಿ ನೇಪಾಳದ ಸ್ನೇಹಿತ ತನ್ನ ರೇನ್ ಕೋಟ್ ತೆಗೆದುಕೊಟ್ಟ.

ಅದನ್ನು ಹಾಕಿ ಕೊಳ್ಳುತ್ತಾ ನನ್ನ ಮೈಮೇಲೆ ಇದ್ದ ಬಟ್ಟೆ ಲೆಕ್ಕ ಹಾಕಿದರೆ .......
................ ಆರು ಪದರು ಹೊದಿಕೆ ಇತ್ತು.

.........ಆದರೂ ಛಳಿ.

ಬೆಂಗಳೂರಿನಿಂದ ಒಯ್ದ ಉಲ್ಲನ್ ಗ್ಲೌಸ್ನ ನಡುವೆ ತೂರಿ ಬರುವ ಛಳಿಯಿಂದಾಗಿ, ಉಗುರು ಕಿತ್ತು ಹೋಗುವಂತೆ ನೋಯುತ್ತಿತ್ತು.




ಜರ್ಮನಿಗೆ ಬಂದ ಮರುದಿನವೇ ಹಿಮ ಪಾತದ ಅನುಭವವನ್ನು ಮೊದಲ ಬಾರಿಗೆ ಪಡೆದಿದ್ದೆ.
ಕ್ಲಾಸಿಗೆ ಹೋಗುವಾಗ ಎಲ್ಲಡೆ ಬೆಳಕಿತ್ತು.

ಗಿಡಗಳೆಲ್ಲ ಎಲೆ ಉದುರಿಸಿ, ಬರಡಗಾಗುತ್ತಿತ್ತು.

ಎರಡು ಘಂಟೆ, "ಭೂಮಿಯ ಬಿಸಿ ಏರುವಿಕೆ"ಯ ಬಗ್ಗೆ ಎರಡು ಘಂಟೆ ಲೆಕ್ಚರ್ ಕೇಳಿ ಹೊರಬಂದರೆ, ನಾನು ಬಂದ ದಾರಿ, ಊರು ಎಲ್ಲ ಬದಲಾದಿದೆ.



ಸಕ್ಕರೆ ಹಾಸಿ ನೆಲದ ಮೇಲೆ, ಬಿಳಿ ಎಲೆಯ ಮರಗಳು.

ಊರಿಗೆ ಬಂದ ಹೊಸದು. ನನಗೆ ದಾರಿ ಬೇರೆ ಸರಿಯಾಗಿ ಗೊತ್ತಿಲ್ಲ. ಈಗಂತೂ ದಾರಿಯೇ ಇಲ್ಲ.

ಬ್ರಾಜ಼ಿಲ್ ನ ಸ್ನೇಹಿತ ಲಿಯೋಗೆ "ನನ್ನ ಮನೆವರೆಗೆ ಬಿಡುವ ಜವಾಬ್ದಾರಿ ನಿನ್ನದು" ಎಂದೆ.

ನನಗಿಂತ ಮೊದಲೇ ಬಂದ ಆತ, ಸ್ವಲ್ಪ ನಗರದ ಬಗ್ಗೆ ಸ್ವಲ್ಪ ಹೆಚ್ಚು ತಿಳಿದುಕೊಂಡಿದ್ದ.



ಮೊದಲ ಬಾರಿ ಹಿಮದ ಹಾದಿಯಲ್ಲಿ ನಡೆಯುತ್ತಿದ್ದೆ....


ಸೈಕಲ್, ಕಾರು ಎಲ್ಲದರ ಮೇಲೆ ಹಿಮ. ಸೈಕಲ್ ಹೊಡೆಯುವ ಹಾಗಿಲ್ಲ. ಜಾರುತ್ತದೆಯೇನೋ ಎನ್ನುವ ಭಯ.




ತಳ್ಳಿಕೊಂಡೆ ಮನಗೆ ಬಂದಾಗ, ಆಗಲೇ ರಾತ್ರಿ. ಸಮಯ ಮಾತ್ರ ಇನ್ನೂ ಮದ್ಯಾಹ್ನ ನಾಲ್ಕು ಘಂಟೆ. (ಛಳಿಗಾಲದಲ್ಲಿ ೭ರಿಂದ ೮ ಘಂಟೆ ಮಾತ್ರ ಹಗಲು).



ರೂಮಿಗೆ ಬಂದ ತಕ್ಷಣ ಕಂಪ್ಯೂಟರ್ ಹಚ್ಚಿ ಹವಾಮಾನ ವರದಿ ನೋಡಿದರೆ ಉಷ್ಣತೆ - ೧೪ಕ್ಕೆ ಇಳಿದಿದೆ!
ಅದನ್ನು ನೋಡುತ್ತಿದ್ದಂತೆ ಮತ್ತೂ ಛಳಿ ಹೆಚ್ಚಾಯಿತು.





ನಮ್ಮೂರಲ್ಲಿ "ಮೂರು ಕಂಬಳಿ ಛಳಿ' (ಅದೇ ನಮ್ಮ ಛಳಿಯ ಅಳತೆಗೋಲು) ಅಂದರೂ ಹೆಚ್ಚೆಂದರೆ ೧೪- ೧೫ ಡಿಗ್ರೀ ಸೆಂಟಿಗ್ರೇಡ್ ಇರುತ್ತದೆ. ಆದರೆ ಇವತ್ತು - ೧೪. ನಮ್ಮ ಛಳಿಗಿಂತ ೩೦ ಡಿಗ್ರಿ ಕಡಿಮೆ!




ಎಲ್ಲರಿಗೆ ಹೊಸ ವರ್ಷದ ಶುಭಾಷಯ......

.................... ಈ ಹಿಮದ ಊರಿಂದ! ......