ಖಂಡಿತವಾಗಿಯೂ ಅದು ನನ್ನ ಜೀವನದ ಅತ್ಯಂತ ಛಳಿಯ ದಿನ!
ನಾನು ನಡುಗುವುದನ್ನು ನೋಡಿ ನೇಪಾಳದ ಸ್ನೇಹಿತ ತನ್ನ ರೇನ್ ಕೋಟ್ ತೆಗೆದುಕೊಟ್ಟ.
ಅದನ್ನು ಹಾಕಿ ಕೊಳ್ಳುತ್ತಾ ನನ್ನ ಮೈಮೇಲೆ ಇದ್ದ ಬಟ್ಟೆ ಲೆಕ್ಕ ಹಾಕಿದರೆ .......
................ ಆರು ಪದರು ಹೊದಿಕೆ ಇತ್ತು.
.........ಆದರೂ ಛಳಿ.
ಬೆಂಗಳೂರಿನಿಂದ ಒಯ್ದ ಉಲ್ಲನ್ ಗ್ಲೌಸ್ನ ನಡುವೆ ತೂರಿ ಬರುವ ಛಳಿಯಿಂದಾಗಿ, ಉಗುರು ಕಿತ್ತು ಹೋಗುವಂತೆ ನೋಯುತ್ತಿತ್ತು.
ಜರ್ಮನಿಗೆ ಬಂದ ಮರುದಿನವೇ ಹಿಮ ಪಾತದ ಅನುಭವವನ್ನು ಮೊದಲ ಬಾರಿಗೆ ಪಡೆದಿದ್ದೆ.
ಕ್ಲಾಸಿಗೆ ಹೋಗುವಾಗ ಎಲ್ಲಡೆ ಬೆಳಕಿತ್ತು.
ಗಿಡಗಳೆಲ್ಲ ಎಲೆ ಉದುರಿಸಿ, ಬರಡಗಾಗುತ್ತಿತ್ತು.
ಎರಡು ಘಂಟೆ, "ಭೂಮಿಯ ಬಿಸಿ ಏರುವಿಕೆ"ಯ ಬಗ್ಗೆ ಎರಡು ಘಂಟೆ ಲೆಕ್ಚರ್ ಕೇಳಿ ಹೊರಬಂದರೆ, ನಾನು ಬಂದ ದಾರಿ, ಊರು ಎಲ್ಲ ಬದಲಾದಿದೆ.
ಸಕ್ಕರೆ ಹಾಸಿದ ನೆಲದ ಮೇಲೆ, ಬಿಳಿ ಎಲೆಯ ಮರಗಳು.
ಊರಿಗೆ ಬಂದ ಹೊಸದು. ನನಗೆ ದಾರಿ ಬೇರೆ ಸರಿಯಾಗಿ ಗೊತ್ತಿಲ್ಲ. ಈಗಂತೂ ದಾರಿಯೇ ಇಲ್ಲ.
ಬ್ರಾಜ಼ಿಲ್ ನ ಸ್ನೇಹಿತ ಲಿಯೋಗೆ "ನನ್ನ ಮನೆವರೆಗೆ ಬಿಡುವ ಜವಾಬ್ದಾರಿ ನಿನ್ನದು" ಎಂದೆ.
ನನಗಿಂತ ಮೊದಲೇ ಬಂದ ಆತ, ಸ್ವಲ್ಪ ನಗರದ ಬಗ್ಗೆ ಸ್ವಲ್ಪ ಹೆಚ್ಚು ತಿಳಿದುಕೊಂಡಿದ್ದ.
ಮೊದಲ ಬಾರಿ ಹಿಮದ ಹಾದಿಯಲ್ಲಿ ನಡೆಯುತ್ತಿದ್ದೆ....
ಸೈಕಲ್, ಕಾರು ಎಲ್ಲದರ ಮೇಲೆ ಹಿಮ. ಸೈಕಲ್ ಹೊಡೆಯುವ ಹಾಗಿಲ್ಲ. ಜಾರುತ್ತದೆಯೇನೋ ಎನ್ನುವ ಭಯ.
ತಳ್ಳಿಕೊಂಡೆ ಮನಗೆ ಬಂದಾಗ, ಆಗಲೇ ರಾತ್ರಿ. ಸಮಯ ಮಾತ್ರ ಇನ್ನೂ ಮದ್ಯಾಹ್ನ ನಾಲ್ಕು ಘಂಟೆ. (ಛಳಿಗಾಲದಲ್ಲಿ ೭ರಿಂದ ೮ ಘಂಟೆ ಮಾತ್ರ ಹಗಲು).
ರೂಮಿಗೆ ಬಂದ ತಕ್ಷಣ ಕಂಪ್ಯೂಟರ್ ಹಚ್ಚಿ ಹವಾಮಾನ ವರದಿ ನೋಡಿದರೆ ಉಷ್ಣತೆ - ೧೪ಕ್ಕೆ ಇಳಿದಿದೆ!
ಅದನ್ನು ನೋಡುತ್ತಿದ್ದಂತೆ ಮತ್ತೂ ಛಳಿ ಹೆಚ್ಚಾಯಿತು.
ನಮ್ಮೂರಲ್ಲಿ "ಮೂರು ಕಂಬಳಿ ಛಳಿ' (ಅದೇ ನಮ್ಮ ಛಳಿಯ ಅಳತೆಗೋಲು) ಅಂದರೂ ಹೆಚ್ಚೆಂದರೆ ೧೪- ೧೫ ಡಿಗ್ರೀ ಸೆಂಟಿಗ್ರೇಡ್ ಇರುತ್ತದೆ. ಆದರೆ ಇವತ್ತು - ೧೪. ನಮ್ಮ ಛಳಿಗಿಂತ ೩೦ ಡಿಗ್ರಿ ಕಡಿಮೆ!
ಎಲ್ಲರಿಗೆ ಹೊಸ ವರ್ಷದ ಶುಭಾಷಯ......
.................... ಈ ಹಿಮದ ಊರಿಂದ! ......
11 comments:
ಸುಂದರ ಫೋಟೋಗಳು
ಸುಂದರ ವಿವರಣೆ ಕೂಡಾ
ಧನ್ಯವಾದಗಳು. ಸ್ವೀಡನ್ ನಲ್ಲಿ ಇನ್ನೂ ಹೆಚ್ಚು ಹಿಮ ಇದ್ದಿರಬೇಕಲ್ವ?
ಬಾಲು ಸಾಯಿಮನೆ
ಚಳಿಯ ಅನುಭವ ನಮಗೂ ಆಯಿತು ನಿಮ್ಮ ಲೇಖನದಿ೦ದ....!!
ನಿಮಗೂ ಹೊಸ ವರ್ಷದ ಶುಭಾಶಯಗಳು.
ಒಳ್ಳೆಯ ಛಾಯ ಚಿತ್ರಗಳು , ಪೂರಕ ಲೇಖನಗಳು ಎಲ್ಲವೂ ಚೆನ್ನಾಗಿದೆ.
nimma blog tappadae oduve. thumba sogasagide.
ಒಳ್ಳೆಯ ಚಿತ್ರಗಳು. ನಿಮ್ ಬಗ್ಗೆ ಓದಿ ಆಶ್ಚರ್ಯ ಆಯ್ತ್. ಕಂಪ್ಯೂಟರ್, ಕೃಷಿ, ಶಿರ್ಸಿ, ನೆದರ್ಲ್ಯಾಂಡ್, ಜರ್ಮನಿ, ಹೀಂಗೆ ಆ ಕಡೆ, ಈ ಕಡೆ, ಎಲ್ಲಾ ಕಡೆ ಕೈ ಆಡ್ಸಿದ್ರಿ. ಓದಿ ಖುಷಿ ಆಯ್ತ್. ಅಂದ್ ಹಾಗೆ ಶಿರ್ಸಿ ಹತ್ರ ಯಾವ್ ಹಳ್ಳಿ?
ಸು೦ದರ ಫೊಟೊಗಳು..ಒಳ್ಳೆಯ ಲೇಖನ..ಚೆನ್ನಾಗಿದೆ.
ದೀಪಸ್ಮಿತ ಅವರೆ, ಧನ್ಯವಾದಗಳು.
ಸಾಯಿಮನೆ ಸಿರಸಿ ಕುಮಟಾ ರಸ್ತೆಯಲ್ಲಿದೆ.
ಕೇಶವ ಪ್ರಸಾದ್, ಮನಮುಕ್ತಾ, ಚುಕ್ಕಿ ಚಿತ್ತಾರ, ನಾರಯಣ್ ಭಟ್ ಅವರಿಗೆ ಧನ್ಯವದಗಳು
ತುಂಬಾ ಇಷ್ಟ ಆಯ್ತು ನೀವು ಬರ್ದಿದ್ದು... ನಿಮ್ಮ e -mail id ಬೇಕಾಗಿತ್ತು ಬಾಲು... ಸಾಧ್ಯ ಆದಾಗ ಕೊಡಿ
ನಂದು ಯಲ್ಲಾಪುರ...
Thank you,
blhegde@gmail.com
Balu Hegde
photo nodidre namge ille chali agthaiddu .....
Post a Comment