ಕೄಷಿ

Monday, May 10, 2010

ಕಾಡ ನೋಡ ಹೋದೆ.......

ಕಳೆದ ಒಂದು ತಿಂಗಳಂದ ಜರ್ಮನಿಯ ಕಾಡನ್ನು ಸುತ್ತಾಡುತ್ತಿದ್ದೇನೆ. ಉತ್ತರ ಭಾಗದ ಹಲವಾರು ನ್ಯಾಶನಲ್ ಪಾರ್ಕ್ ಮತ್ತು ನಿಸರ್ಗ ಸಂರಕ್ಸಿತ ಪ್ರದೇಶಗಳನ್ನು ಸುತ್ತಿದ್ದೇನೆ.ಛಳಿಗಾಲದಲ್ಲಿ ಎಲೆ ಉದುರಿಸಿ, ಭರಡಾಗಿದ್ದ ಕಾಡಿಗೆ, ಛಳಿಗಾಲ ಮುಗಿಯುತ್ತದ್ದ ಹಾಗೆ ವಸಂತದ ಜೀವನೋತ್ಸಾಹ! ಎಲ್ಲೆಡೆ ಹಸಿರು.

ನೆಲವೆಲ್ಲ ಆವರಿಸಿದ್ದ ಹಿಮ ಕರಗಿದ ಮೇಲೆ ಎಲೆ ಉದುರಿದ ಕಾಡಿನಲ್ಲಿ, ಎಲ್ಲ ಭಣ ಭಣ.ಅಪರೂಪಕ್ಕೆ ಕಂಡ ಸೂರ್ಯ ರಶ್ಮಿ ನೆಲದೊಳಗಿನ ಗಡ್ಡೆಗಳಿಗೆಲ್ಲ ಜೀವ ಬರುತ್ತದೆ.

ವರ್ಷವೆಲ್ಲ ಅಡಗಿ ಕುಳಿತ ಬೇಸರವ ಮರೆಯಲು, ಒಮ್ಮೆಲೆ ಚಿಗುರಿದ ಉತ್ಸಾಹ. ಕಾಡು ಮರಗಳು ಎಲೆ ಚಿಗಿರುವ ಮೊದಲೇ ತಮ್ಮ ಬದುಕನ್ನು ಕಂಡುಕೊಳ್ಳಬೇಕು. ಎಲೆ ಚಿಗಿರಿದ ಮೇಲೆ ಮತ್ತೆ ಕತ್ತಲು, ಸೂರ್ಯ ಕಾಣುವುದಿಲ್ಲ. ಬಾಳು ಬೆಳಗುವಿದಿಲ್ಲ. ಅದಕ್ಕೇ ಇರಬೇಕು , ಎಷ್ಟೊಂದು ಉತ್ಸಾಹ ನೋಡಿ! ಮೊನ್ನೆ ಮೊನ್ನೆಯ ವರೆಗೆ ಹಿಮ ತುಂಬಿದ್ದ ಕಾಡಿನಲ್ಲಿ, ಹಿಮ ಕರಗುತ್ತಿದ್ದ ಹಾಗೆ, ಇಂದು ಎಷ್ಟೊದು ಹೂವುಗಳು!


ಕಾಡು ಬದಲಾಗುವ ಪರಿ ಎಂಥ ಸೋಜಿಗ! ಅದೇ ಉತ್ಸಾಹದಲ್ಲಿ ಸುತ್ತುದ್ದೇನೆ. ನಿತ್ಯ ಹರಿದ್ವರ್ಣ ಕಾಡಿನಲ್ಲಿ ಹುಟ್ಟಿ ಬೆಳೆದ ನನಗೆ, ವಸಂತನ ಆಗಮನದ ಸಂಭ್ರಮ ಅಷ್ಟಾಗಿ ಗೊತ್ತಿಲ್ಲ. ಅಲ್ಲಿ ನಿತ್ಯ ವಸಂತ! ಇಲ್ಲಿ ಬದಲಾವಣೆ ನಿರಂತರ.
ನಿತ್ತ ಹರದ್ದ್ವರ್ಣ ಕಾಡಿನಲ್ಲಿ ವರ್ಷವೆಲ್ಲ ಬದುಕು; ಹಾಗಾಗಿ ಬದುಕಿಗಾಗಿ ಹೊರಾಟ. ತಾ ಮುಂದು ತಾ ಮುಂದು ಎಂದು ಎತ್ತರ ಬೆಳೆಯುವ ಸ್ಪರ್ಧೆ. ಇಲ್ಲಿ, ಬೆಳಕಿಗೇ ತತ್ವಾರ. ಬಂದಾಗ ಸಂಭ್ರಮ; ಜನರಿಗೆ ಮಾತ್ರವಲ್ಲ. ಸಸ್ಯಗಳಿಗೆ ಕೂಡ.ಐದು ತಿಂಗಳು ಬದುಕು ಸಾದ್ಯವಿಲ್ಲವೆಂದು ನೆಲದಲ್ಲಿ ಅಡಗಿ ಕುಳಿತ ಸಸ್ಯಗಳೆಲ್ಲ ಮೊದಲ ತಲೆ ಹೊರ ಚಾಚಲು ಪ್ರಾರಭ. ಸ್ವಾಗತಕ್ಕೆ ಎಷ್ಟೋಂದು ಅಲಂಕಾರ?
ನೀ ಬರೋ ಹಾದಿಯಲಿಹಾಸಿಹೆ ಹೂವಿನಲಿ.
ಇಂತದೇ ಚಿತ್ರಗಳ ರಾಶಿ ಬಿದ್ದಿದೆ, ನನ್ನ ಕಂಪ್ಯೂಟರಿನ ಫೋಲ್ಡರಿನಲ್ಲಿ. ಯಾವುದನ್ನು ಆಯಲಿ, ಯಾವುದನ್ನ ಬಿಡಲಿ?ಇನ್ನಷ್ಟು ಚಿತ್ರಗಳು, ಬರಹಕ್ಕೆ ಸೇರಿಸುತ್ತೇನೆ. ಇನ್ನೊಂದೆರಡು ದಿನಗಳಲ್ಲಿ.

15 comments:

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಬಾಲು ಅವರೇ;ನಿಜಕ್ಕೂ ನೀವು ಅದೃಷ್ಟವಂತರು.ನಿಮ್ಮ ಉದ್ಯೋಗವೇ ಪ್ರಕೃತಿಯ ಒಡನಾಟ !ಕಾಡಿನ ಹಾದಿಯ ಚಿತ್ರಗಳು ತುಂಬಾ ಚೆನ್ನಾಗಿವೆ.ಮನೆಯಲ್ಲಿ ಕುಳಿತೆ ಜರ್ಮನಿಯ ಕಾಡಿನ ದರ್ಶನವಾಯಿತು.ಇನ್ನಷ್ಟು ಚಿತ್ರಗಳು ನಿಮ್ಮ ಬ್ಲಾಗಿನಲ್ಲಿ ಬರಲಿ.ನಮಸ್ಕಾರಗಳು.

shivu.k said...

ಬಾಲು ಸರ್,

ಜರ್ಮನಿಯ ಕಾಡುಗಳಲ್ಲಿ ಸುತ್ತಾಡುತ್ತಿರುವ ನೀವು ನಿಜಕ್ಕೂ ಪುಣ್ಯ ಮಾಡಿದ್ದೀರಿ. ಕಾಡು ಮತ್ತು ಹೂವುಗಳ ಚಿತ್ರಗಳು ತುಂಬಾ ಚೆನ್ನಾಗಿವೆ. ಇನ್ನಷ್ಟು ಚಿತ್ರಗಳಿಗೆ ಕಾಯುತ್ತೇನೆ.

Ravi Hegde said...

ಹೂವು ಮೊಸ್ತು ಆಗಿದ್ದು..
ಊರ ಬದಿಂದ ಇನ್ನು ಯಾರೂ (ಗಿಡದ) ಬುಡ ಕೇಳಿದ್ವಿಲ್ಯ?

ravi

Anonymous said...

Sakkattagiddo..

ಶ್ರೀನಿಧಿ.ಡಿ.ಎಸ್ said...

nimma blog na halavu lekhanagaLanna odide. tumba chanda bareyutteeri.

allello suttaaDutta, bareyutta..

hottekichchaithu!

"NRK" said...

really good photos n explanation, plz continue.

ಜಲನಯನ said...

Nice fotos and ttiles...good work...Balu...

aravind said...

ಚಿತ್ರ-ಲೇಖನ ತುಂಬಾ ಚೆನ್ನಾಗಿದೆ. ನಿಮ್ಮ ಎಲ್ಲಾ ಅನುಭವಗಳನ್ನೂ ಹೀಗೇ ದಾಖಲಿಸಿ. ಸಾಧ್ಯವಾದರೆ ಜರ್ಮನಿಯಲ್ಲಿರುವ ಮೆರ್ಕರ್ಸ ಮೈನ ಎಂಬ ಗಣಿಯನ್ನು ನೋಡಿ. ಎರಡನೇ ಮಹಾಯುದ್ದದ ಪುಟಗಳು ನಿಮ್ಮ ನೆನಪಿನ ಆಳದಲ್ಲಿ ತೆರೆದುಕೊಳ್ಳುತ್ತವೆ.
ಮುಂದಿನ ಬರಹಗಳಿಗಾಗಿ ಕಾದಿರುವೆ.
ಅರವಿಂದ,ಶಿವಮೊಗ್ಗ

babu said...

ವಿದೇಶಕ್ಕೆ ಹೋಗುವ ಎಲ್ಲರೂ ಪ್ರಕೃತಿಯ ಸೊಭಗನ್ನು ಸವಿಯುವುದಿಲ್ಲ. ಕಾಲಿ ದುಡ್ಡು ಮಾಡುವುದು ನೋಡುತ್ತಾರೆ .good, you are enjoing.thanks for good photos

Girish said...

its very nice.... Tumba channagi baradde.... nangantu Germany parisarada bagge ond idea baro hage anubhava aatu...hage barita iru...

ವಿನಾಯಕ ಕುರುವೇರಿ said...

ಒಳ್ಳೆಯ ಫೋಟೋಗಳು..ನನಗೂ ಕಾಡು ಸುತ್ತೋ ಆಸೆ ಆಗ್ತಿದೆ .ಇನ್ನಷ್ಟು ಕಾಡಿನ ಫೋಟೋಗಳನ್ನು ನಿರೀಕ್ಷಿಸುತ್ತಿದ್ದೇನೆ..

ಮನದಾಳದಿಂದ............ said...

wav.......
nice

ಸಹ್ಯಾದ್ರಿ said...

ಬಾಲಣ್ಣಾ..
ಈಗ ಎಲ್ಲಿದ್ದಿ...
ಮತ್ತೆ ಬ್ಲಾಗ್ ಬರೆಯಲು ಶುರು ಮಾಡೋಣ ಅಂಥ.
ಇನ್ನೊಂದು ವಾರದಲ್ಲಿ ತೆರಾಳಿ ಗುಡ್ಡದ ಬಗ್ಗೆ ಬರೆದು ಮುಗಿಸಿಬಿಡ್ತಿನಿ..
ನೋಡ್ತಿರಲ್ವಾ ?

Nayana said...
This comment has been removed by the author.
Nayana said...

How nice to read your expressions! I live in Salzburg since 2 years and what struck me the most is the change of seasons.

Maneya nityaharidwarnakkoo, illiya prati 4 tingaligoo badalaaguva ritugaligoo entha vibhinnate! I find that to be the most colourful of diversity I have ever experienced! Nice to share these thoughts with a fellow Kannadiga.

Are you still in Germany?