ಕೄಷಿ

Sunday, December 19, 2010

ವೇನಿಸ್ ಎಂಬ ಮುಳುಗುತ್ತಿರುವ ನಗರ

ಇತಿಹಾಸದ ವ್ಯಂಗ್ಯ ನೋಡಿ. ಒಮ್ಮೆ ಇಡೀ ಜಗತ್ತಿನ ವ್ಯಾಪಾರದ ಕೇಂದ್ರ ಬಿಂದುವಾದ ವೆನೀಸ್ ಇಂದು
ಕೇವಲ ಒಂದು "ಸತ್ತು ಹೋದ ನಗರ".
ಶತಮಾನದ ಹಿಂದೆ ಭಾರತ ಮತ್ತಿತರ ಏಷ್ಯಾದ ದೇಶಗಳಿಂದ
ಯುರೋಪಿಗೆ ಹೋಗುತ್ತಿದ್ದ ಸಂಬಾರ ಪದಾರ್ಥಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು.
ಯುರೋಪಿನ ಇತಿಹಾಸದಲ್ಲಿ ವೆನೀಸಿಗೆ ಪ್ರಮುಖ ಸ್ಥಾನ. ಅದು ವ್ಯವಹಾರಗಳ ಕೇಂದ್ರವಾಗಿತ್ತು.

"ಮರ್ಚಂಟ್ಸ್ ಆಫ್ ವೆನಿಸ್" ಶೇಕ್ಸ್ ಪೀಯರನ ಪ್ರಮುಖ ನಾಟಕ.
ಇಲ್ಲಿನ ವ್ಯಾಪಾರ, ಅದರೊಂದಿಗೆ ಸೇರಿದ ಮೋಸ, ವರ್ಗ ಸಂಘರ್ಷ, ಹೀಗೆ ಏನೆಲ್ಲ ಆ ಕಾಲದ ಸೆಳಕುಗಳನ್ನು ತೆರೆದಿಡುತ್ತದೆ ಆ ನಾಟಕ.ಆ ನಾಟಕದ ನೆನಪಿನಲ್ಲಿ ಈ ಊರಿಗೆ ಹೋದರೆ ಅಲ್ಲಿ ಇರೋದು ಬರೀ ಪ್ರವಾಸೋದ್ಯಮ ಮಾತ್ರ. ನಗರ ಹಾಳು ಬಿದ್ದಿದೆ. ಸಮುದ್ರದ
ನಡುವಿನ ಮರಳ ರಾಶಿಯಲ್ಲಿ ನಿಂತಿದ್ದ ನಗರ ನೀರಿನಲ್ಲಿ ಕುಸಿಯುತ್ತಿದೆ; ಇತಿಹಾಸದ ಹಾಗೆ!.

"ಅದು ಈಗ ಬದುಕಿರುವುದು ಕೇವಲ ಪ್ರವಾಸೋದ್ಯಮದ ಮೇಲೆ. ಹಾಗಾಗಿ ಕ್ರತಕವಾಗಿ ಆ ನಗರವನ್ನು
ಬದುಕಿದಂತೆ ತೋರಿಸಲಾಗುತ್ತಿದೆ" ಎನ್ನುತ್ತಾರೆ ಇಟಲಿಯ ಅಂತಾನಿಯೋ.
ಇಟಲಿಯ ದಕ್ಷಿಣ ತುದಿಯ ನಗರದ ಒಂದಿಷ್ಟು ನೋಟ, ನಿಮಗಾಗಿ.

6 comments:

ಸುಬ್ರಮಣ್ಯ ಮಾಚಿಕೊಪ್ಪ said...

ವೆನಿಸ್ ನಲ್ಲೀಗ ಸ್ಥಳೀಯ ಜನರಿಗಿಂತ ಪ್ರವಾಸಿಗರ ಸಂಖ್ಯೆಯೇ ಹೆಚ್ಹಾಗುತ್ತಿದೆ ಎಂದು ನ್ಯಾಷನಲ್ ಜಿಯಾಗ್ರಫಿಕ್ ಮಾಸಿಕದಲ್ಲಿ ಓದಿದ ನೆನಪು.

ಚುಕ್ಕಿಚಿತ್ತಾರ said...

ಸು೦ದರವಾದ ಫೋಟೋಗಳೊ೦ದಿಗೆ ವೆನಿಸ್ ನ ಚಿತ್ರಣ ಕೊಟ್ಟಿದ್ದಕ್ಕಾಗಿ ವ೦ದನೆಗಳು.

shivu.k said...

ವೆನಿಸ್ಸಿನ ಬಗ್ಗೆ ಚಿತ್ರಸಹಿತ ಮಾಹಿತಿ, ಜೊತೆಗೆ ಅದು ಸಾಯುತ್ತಿರುವ ವಿವರಣೆ...ಎಲ್ಲಾ ಚೆನ್ನಾಗಿದೆ.

Ravi Hegde said...

global warming?!

Jagadeesh Balehadda said...

http://www.carters.com.au/index.cfm/item/14403-army-and-navy-toothpaste-pot-lid-for-areca-nut/
Nanu kotta link omme nodi .
nimma blog channagi baruttide.

ಬಾಲು ಸಾಯಿಮನೆ said...

ಧನ್ಯವಾದಗಳು. ನಿಮ್ಮೆಲ್ಲರ ಪ್ರತಿಕ್ರಿಯೆಗೆ.
ಜಗದೀಶ್ ಬಾಳೆಹದ್ದರವರೇ,ಈಗಷ್ಟೆ ನಾನು ಅಡಿಕೆ ಟೂತ್ ಪೇಷ್ಟ್ ಬಗ್ಗೆ ಮುಂದಿನ ಆದಿಕೆ ಪತ್ರಿಕೆ ಸಂಚಿಕೆಯೆ ಬರೆಯುತ್ತಿದ್ದೇನೆ. ನೀವು ಕೊಟ್ಟ ಮಾಹಿತಿ ಕೆಲವು ದಿನಗಳ ಹಿಂದೆ ನಾನೂ ಗಮನಿಸಿದ್ದೆ. ಚನ್ನಾಗಿದೆ.ಪಡ್ರೆಯವರು ಈ ಬಗ್ಗೆ ಸಕಷ್ಟು ಮಾಹಿತಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಫೆಬ್ರುವರಿ ಸಂಚಿಕೆ ಓದಿ; ಇನ್ನಷ್ಟು ಮಾಹಿತಿಗಾಗಿ.
ಮತ್ತೊಮ್ಮೆ ಧನ್ಯವಾದಗಳು