ಕೄಷಿ

Sunday, March 15, 2009

ಶರಾವತಿ ಕಣಿವೆಗೆ ಆನೆಗಳ ವಿದಾಯ


ಮೊನ್ನೆ ಪತ್ರಿಕೆಯಲ್ಲಿ ಓದಿದ ಸುದ್ದಿ ಮತ್ತೆ ಮತ್ತೆ ಕಾಡುತ್ತಿದೆ. ಶರಾವತಿ ಕಣಿವೆಯಲ್ಲಿ ಬದುಕುತ್ತಿದ್ದ ಆನೆ ಸತ್ತು ಹೋಗಿದೆಯಂತೆ. ಆ ಮೂಲಕ ಮುಂದಿನ ತಲೆಮಾರಿನ ಪಾಲಿಗೆ ಶರಾವತಿ ಕಣಿವೆಯಲ್ಲಿ ಆನೆಗಳಿಲ್ಲದ ಕಾಡು. ಸಾವಿರಾರು ವರುಶಗಳಿಂದ ಬಾಳಿಕೊಂಡಿದ್ದ ಜೀವಿಯೊಂದು ಅಲ್ಲಿ ಬಾಳಲಾರದೆ ಕೊನೆಯುಸಿರೆಳೆದಿದೆ.
ಜಲ ವಿದ್ಯುತ ಯೋಜನೆಗಳು, ಆ ಕಣಿವೆಯ ಕಾಡನ್ನು ನುಂಗಿದ ಮೇಲೆ ಅಳಿದುಳಿದ ಪಕ್ಕದ ಕಾಡಿನಲ್ಲಿ
ಬಾಳಿಕೊಂಡಿದ್ದ ಆನೆ ಮೊನ್ನೆ ಮಹಿಮೆಯ ಸಮೀಪದ ಕಾಡಿನಲ್ಲಿ ಸತ್ತು ಬಿದ್ದದ್ದು ಕಂಡುಬಂದಿದೆ.
ಮೈಸೂರು ಪ್ರಾಂತದಿಂದ ಈ ಭಾಗಕ್ಕೆ ವಲಸೆ ಬರುತ್ತಿದ್ದವು ಎಂದು ಶತಮಾನಗಳ ಹಿಂದಿನ ಧಾಖಲೆ ಹೇಳುತ್ತದೆ. ಹಾಗೆ ಬಂದವಕ್ಕೆ ಹಿಂದೆ ಹೋಗಲಾರದಂತೆ ಮಧ್ಯದ ಕಾಡು ನಾಶವಾಗಿ ಇಲ್ಲೇ ಉಳಿಯಬೇಕಾಯಿತು. ನಂತರದ ಅಭಿವೃದ್ದಿ ಯೋಜನೆಗಳು ಈ ಪ್ರದೇಶವನ್ನೂ ಛಿಧ್ರಗೊಳಿಸಿದವು.

ಉತ್ತರ ಕನ್ನಡದಲ್ಲಿ ಈಗ ಆನೆಗಳಿರುವುದು ದಾಂಡೇಲಿಯ ಸುತ್ತ ಮುತ್ತ ಮಾತ್ರ. ಸಂಖ್ಯೆ ಕೇವಲ ಅರ್ಧ ಶತಕದ ಆಜೂ ಬಾಜು. ಅವೂ ಅಲ್ಲಿ ಬಾಳಲಾರದೇ ಅರ್ಧ ಮಹಾರಾಷ್ಟ್ರಕ್ಕೆ, ಉಳಿದರ್ಧ ಯಲ್ಲಾಪುರ, ಮುಂಡಗೋಡದ ಮಾರ್ಗದಲ್ಲಿ ಹಾವೇರಿ ಜಿಲ್ಲೆ ಹೋಗುತ್ತಿವೆ. ಸರಕಾರಿ ದಾಖಲೆಗಳಲ್ಲಿ ಶೇ ೮೦ ಪ್ರತಿಶತ ಕಾಡು ಇರುವ ಉತ್ತರ ಕನ್ನಡ ಜಿಲ್ಲೆ ಇಷ್ಟು ಆನೆಗಳೂ ಭಾರವಾದವೇ.

ನಿಸರ್ಗ ಮತ್ತು ಮನುಷ್ಯನ ಹೋರಾಟದಲ್ಲಿ ನಿಸರ್ಗ ಈ ಕ್ಷಣಕ್ಕೆ ಸೋತಂತೆ ಅನ್ನಿಸಿದರೂ, ಸೋತವರು ನಾವೇ ಎಂದು ತಿಳಿಯಲು ಕಾಲ ಬೇಕು.

2 comments:

ಬಾಲು ಸಾಯಿಮನೆ said...

ನಿಮ್ಮ ಬ್ಲಾಗ್ ನೋಡಿದೆ. ಎಲ್ಲೋ ಕಾಡಿನ ಹಳ್ಳದಂಚಿನಲ್ಲಿ ಅಳುಕುತ್ತ ಮರಳ ಮೇಲೆ ಮೆಲ್ಲಗೆ ಕಾಲಿಟ್ಟಂತಿದೆ. ಹೆಜ್ಜೆ ಅಷ್ಟು ಸ್ಪಷ್ಟವಾಗಿ ಮೂಡಿದಂತಿಲ್ಲ. ಗಟ್ಟಿ ಊರಿ ಕಾಲ ಬಾಲು. ಆರಂಭದ ಚಿತ್ರಗಳು ಆಕರ್ಷಕವಾಗಿವೆ. ಆದರೆ ವಿವರಣೆ ತೀರಾ ಚಿಕ್ಕದು. ಕಡ್ಡಿ ಕಂಡರೇ ಗುಡ್ಡ ಮಾಡುವವರ ಕಾಲ ಇದು. ನೀವು ಗುಡ್ಡದಂಚಿನಲ್ಲಿ ನಿಂತು ಅಷ್ಟು ದೂರದ ಕಾಳಿಯ ಹೃದಯಂಗಮ ಚಿತ್ರ ತೆಗೆದಿದ್ದೀರಾ. ತುಸು ವಿವರಣೆ ನೀಡಿ. ಕಣ್ಮರೆಯಾದ ಆ ಆನೆ ಸಂತತಿಯ ಬಗ್ಗೆ ಕೊನೆಯ ಆನೆಯ ದುರಂತ ಜೀವನದ ಬಗ್ಗೆ ನಿಮಗೆ ಬೆಟ್ಟದಷ್ಟು ಗೊತ್ತಿರಲು ಸಾಕು. ವಿವರಿಸಿ. ಹಾಗೇ ನಿಮ್ಮ ಹಳೇ ಕೆಲವು ಲೇಖನಗಳು ಪ್ರಕಟ ಆದವು, ಆಗದವು ಎಲ್ಲವನ್ನೂ ಪೋಣಿಸುತ್ತ ಹೋಗಿ.
-ನಾಹೆ.

Unknown said...

Balu,

Chennagi baritiddiya. Keep it up. Adre prati vara enadru baribeku.

Guru