ಕೄಷಿ

Monday, March 23, 2009

ಕೊನೆಯ ಪುಟವೋ? ಮೊದಲ ಪುಟವೋ?

ದಾಂಡೇಲಿ ಕಾಡಿನಲ್ಲಿ ಈಗ ಶೋಕಾಚರಣೆ. ಆರು ದಶಕಗಳಿಂದ ಕಾಡಿಗೆ ಸೇವೆ ಸಲ್ಲಿಸಿದವರು ಕರ್ತವ್ಯ ಮುಗಿಸಿ ಹೊರಡುವ ತಯಾರಿಯಲ್ಲಿದ್ದಾರೆ.


ಪ್ರತಿ ವರ್ಷ ಎಲೆ ಉದುರಿಸಿ, ಗೊಬ್ಬರ ಹಾಕಿ, ಬೇರೆ ಯಾರೂ ಬರದ ಹಾಗೆ ಮುಳ್ಳು ಬೇಲಿ ಕಟ್ಟಿ ಕಾಡನ್ನು ಬೆಳೆಸುವ ಪ್ರಯತ್ನ ಮಾಡಿದವರು, ಕಾಡಿಗೆ ವಿದಾಯ ಹೇಳ ಹೊರಟಿದ್ದಾರೆ.

ಎಲ್ಲಿ ಬೆಂಕಿ ಹಾಕಬಹುದೆಂಬ ಅತಂಕ. ......

ಇದೊಳ್ಳೆ ಕಥೆ!

ಕರ್ತ್ಯವ್ಯ ಮುಗಿಸಿ ಹೊರಟರೆ ಯಾರು ಬೆಂಕಿ ಹಾಕುತ್ತಾರೆ ಎಂಬ ಪ್ರಶ್ನೆಯೆ?

ಕರ್ತ್ಯವ್ಯ ಮುಗಿಸಿ ಹೊರಟವರು; ಮನುಷ್ಯರಲ್ಲ; ಸಸ್ಯ. ಹೆಸರು ಬಿದಿರು.
ಆ ವಿದ್ಯಮಾನದ ಹೆಸರು "ಕಟ್ಟೆ".- ಬಿದಿರು ಕಟ್ಟೆ.

ಬಿದಿರಿನ ಕಟ್ಟೆ ಅಂದರೆ ಹೂ ಬಿಡುವುದು.
ಬಿದಿರು ಹೂ ಬಿಡುವುದು ನಲವತ್ತರಿಂದ ಅರವತ್ತು ವರ್ಷಗಳಿಗೊಮ್ಮೆ ಮಾತ್ರ ಎಂದು ಎಲ್ಲರಿಗೂ ಗೊತ್ತಿರಬಹುದು.

ಹೂ ಬಿಟ್ಟು ಬೀಜವಾಗುವ ಈ ಪ್ರಕ್ರಿಯೆ ಬಿದಿರಿನ ಜೀವನದಲ್ಲಿ ಒಮ್ಮೆ ಮಾತ್ರ.

ಅಕ್ಕಿಯ ಹಾಗೆ ಕಾಣುವ ಬಿದಿರ (ಬೀಜ) ಅಕ್ಕಿ ಬೇಯಿಸಿ ಊಟ ಮಾಟಬಹುದು.


'ಜಡ್ಡು ಭತ್ತ'ದ ಹಾಗೆ ಕಾಣುವ ಈ ಅಕ್ಕಿ ರುಚಿ ಮಾತ್ರ ಸ್ವಲ್ಪ ಭಿನ್ನ.

ಬಿದಿರಿನ ಕಟ್ಟೆಗೆ ಬರಗಾಲಕ್ಕೆ ಯಾವಗಲೂ ಸಂಬಧವನ್ನು ಕಲ್ಪಿಸಲಾಗುತ್ತದೆ.

ನನ್ನಜ್ಜ ಮಾತಿನ ಮಧ್ಯ , "ಬಿದಿರು ಕಟ್ಟೆ ವರ್ಷ" ಎಂದು ಅದನ್ನೊಂದು ಮೈಲು ಗಲ್ಲಾಗಿ ಉಪಯೋಗಿಸತ್ತಿದ್ದುದು ನೆನಪಿದೆ. ಬಿದಿರು ಕಟ್ಟೆ ಯನ್ನು ನೋಡಿದ ಜನಕ್ಕೆ ಅದೊಂದು ಮರೆಯಲಾಗದ ವರ್ಷ ಎಂದೆನಿಸುತ್ತದೆ. ಬಿದಿರಿನ ಅಕ್ಕಿ ಊಟ ಮಾಡಿ ಬದುಕಿದ್ದನ್ನು ನೆನಪಿಸುವ ಜನ ಇನ್ನೂ ನಮಗೆ ಅಲ್ಲಲ್ಲಿ ಸಿಗುತ್ತಾರೆ.


ಕರ್ನಾಟಕದಲ್ಲಿ ಬಿದಿರ ಕಟ್ಟೆ ಪ್ರಾರಂಭವಾಗಿ ನಾಲ್ಕೈದು ವರ್ಷಗಳೇ ಆದವು. ಕೆಲವು ವರ್ಷಗಳ ಹಿಂದೆ ಭದ್ರಾ ಅಭಯಾರಣ್ಯದಲ್ಲಿ ಬಿದಿರಿಗೆ ಕಟ್ಟೆ ಬಂದು ಎಲ್ಲ ಒಣಗಿ ನಿಂತಾಗ ಬೆಂಕಿ ಬಿದ್ದಿದ್ದರ ಪರಿಣಾಮವಾಗಿ ಕಾಡೆಲ್ಲ ನಾಶವಾಗಿದ್ದು ನೆನಪಿರಬಹುದು.

ದಾಂಡೇಲಿಯಲ್ಲಿ ಕಳೆದ ವರ್ಷದಿಂದ ಬಿದಿರಿಗೆ ಹೂವು ಬರಲು ಪ್ರಾರಂಭವಾಗಿದೆ. ಕಾಡೆಲ್ಲ ಒಣಗಿ ನಿಂತಿದೆ. ಬೆಂಕಿ ಬಿದ್ದರೆ ಕಾಡೆಲ್ಲ ಉರಿದು ಹೋಗುವಂತಾಗಿದೆ. ಅರಣ್ಯ ಇಲಾಖೆ ಸಹ ಆತಂಕದಿಂದಿದೆ.


ಈಶಾನ್ಯ ರಾಜ್ಯಗಳಲ್ಲಿ ಈಗಷ್ಟೇ ಬಿದಿರು ಕಟ್ಟೆ ಮುಗಿದಿದೆ. ಭಾರೀ ಬರಗಾಲ ಬರಬಹುದೆಂಬ ಜನರ ನಿರೀಕ್ಷೆ ಇನ್ನೂ ಜೀವಂತವಾಗಿದೆ. (ಆರ್ಥಿಕ ಹಿಂಜರಿತಕ್ಕೂ ಇದಕ್ಕೂ ಸಂಭಂಧ ಇರಲಿಕ್ಕಿಲ್ಲ ಬಿಡಿ.)

ಸಾಮಾನ್ಯವಾಗಿ ಬಿದಿರಿನ ಅಕ್ಕಿ ಹೇರಳವಾಗಿ ಸಿಗುವುದರಿಂದ ಇದನ್ನು ತಿಂದು ಇಲಿಗಳ ಸಂಖ್ಯೆ ಹೆಚ್ಚಾಗುತ್ತದೆ. ನಂತರದಲ್ಲಿ ಅಹಾರ ಇಿಲ್ಲದ ಇಇಲಿಗಳು ಸಮೀಪದ ಗದ್ದೆಗಳಿಗೆ ಧಾಳಿ ಇಟ್ಟು ಬೆಳೆ ಹಾನಿ ಮಾಡುತ್ತವೆ. ಅಹಾರ ಿಲ್ಲದ ಿಲಿಗಳು ಸಾವು ಪ್ಲೇಗ ನಂತಹ ರೋಗಕ್ಕೆ ಕಾರಣವಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಸಿಗುವ ವಿವರಣೆ.


ಅರಣ್ಯ ಇಲಾಖೆಯಂತೂ ಅದಷ್ಟು ಬಾಚಿಕೊಳ್ಳುವ ತಯಾರಿಯಲ್ಲಿದೆ. ಒಣ ಬಿದಿರು ಇದ್ದರೆ ಬೆಂಕಿ ಬಿದ್ದಾಗ ಆರಿಸುವುದು ಸಾಧ್ಯವಿಲ್ಲವೆಂಬ ನೆಪವೊಡ್ಡಿ ನಿರಂತರ ಬಿದಿರು ಕಡಿದು ಸಾಗಿಸುತ್ತಿದೆ.


ಬಿದಿರು ಹಾಗೆ ಒಮ್ಮೆಲೆ ಏಕೆ ಹೂ ಬಿಟ್ಟು ಸತ್ತು ಹೋಗುತ್ತದೆ?

ವೈಜ್ಣಾನಿಕ ಕಾರಣಗಳು ಹಲವಾರು ಅಂತರಜಾಲದಲ್ಲಿ ಸಿಗಬಹುದು.

ಆದರೆ ನನಗನ್ನಿಸುವುದು, ಅದೊಂದು ನಿಸರ್ಗ ಚಕ್ರದ ಬಾಗ ಎಂದು ಮಾತ್ರ. ಒಂದು ಪಾಳು ಬಿದ್ದ ಜಾಗದಲ್ಲಿ ಸಸ್ಯ ಬೆಳೆಯುವಪ್ರಕ್ರಿಯೆಯನ್ನೊಮ್ಮೆ ನೋಡಿ. ಕಳೆ, ಹುಲ್ಲು, ಒಂದೊಷ್ಟು ಪೊದೆ ಜಾತಿಯ ಸಸ್ಯಗಳು, ಹೀಗೆ ಒಂದಾದ ಮೇಲೊಂದರಂತೆ ಸಸ್ಯಗಳು ಬೆಳೆಯುತ್ತವೆ. ಅವು ಅಲ್ಲೇ ಬಿದ್ದು ಕೊಳೆತು ಮಣ್ಣು ಮತ್ತಷ್ಟು ಫಲವತ್ತಾಗಿ, ಆ ಸಸ್ಯಗಳ ನಡುವೆ ಮರಗಳಗುವ ಸಸ್ಯಗಳ ಬೀಜ ಮೊಳಕೆಯೊಡೆಯುತ್ತವೆ.

(ಹಳೆ ಮೈಸೂರು ಬಾಗದಲ್ಲಿ "ನಿನ್ನ ಮನೆ ಎಕ್ಕುಟ್ಟೋಗಾ!" ಎಂದು ಬೈಯ್ಯುವುದು ಕೇಳಿರಬಹುದು. . ಸಾಮಾನ್ಯವಾಗಿ ಹಾಳು ಬಿದ್ದ ಜಾಗದಲ್ಲಿ ಮೊದಲು ಬೆಳೆಯುವ ಸಸ್ಯ ಎಂದರೆ ಎಕ್ಕದ ಜಾತಿಯ ಗಿಡ. ಅಂದರೆ ನಿನ್ನ ಮನೆ ಜಾಗದಲ್ಲಿ ಎಕ್ಕದ ಗಿಡ ಹುಟ್ಟಲಿ ಎಂದು.)

ನಿತ್ಯ ಹರಿದ್ವರ್ಣ ಕಾಡಿನಲ್ಲಿ ಗುರಿಗೆ ಜಾತಿಯ ಸಸ್ಯಗಳು ಬೆಳೆಯುತ್ತವೆ. ಕಾಡಿನ ಅಂಚಿನಲ್ಲಿ ಬೆಳೆಯು ಈ ಸಸ್ಯಗಳು, ಸಾಮಾನ್ಯವಾಗಿ ನಾಲ್ಕು ವರ್ಷಕ್ಕೊಮ್ಮೆ ಹೂ ಬಿಢುತ್ತವೆ. ಮಳೆ ಹೆಚ್ಚು ಬೀಳುವ ಈ ಭಾಗದಲ್ಲಿ ನಾಲ್ಕು ವರ್ಷ ಕಾಡನ್ನು ರಕ್ಷಣೆ ಮಾಡಿ, ತರಗೆಲೆ ಹಾಕಿ, ಫಲವತ್ತತೆ ಹೆಚ್ಚಿಸಿದರೆ, ಉಳಿದ ಮರಗಳಾಗುವ ಸಸ್ಯಗಳ ಬೇಜ ಇವುಗಳ ಸಂಧಿಯಲ್ಲಿ ಮೊಳಕೆಯೊಡೆದು, ಬೆಳೆಯುತ್ತದೆ. ಹಾಗೆ ಆ ಮರಗಳು ಬೆಳೆಯಲು ತೊಡಗಿದಾಗ 'ಗುರಿಗೆ' ಅಲ್ಲಿಂದ ಮರೆಯಾಗುತ್ತದೆ. ತನ್ನ ಕರ್ತವ್ಯ ಮುಗಿಯಿತೆಂದು ಪಕ್ಕದ ಹುಲ್ಲುಗಾವಲಿನಲ್ಲಿತ್ತ ಸಾಗುತ್ತದೆ.

ಅರೆ ನಿತ್ಯ ಹರಿದ್ವರ್ಣ ಮತ್ತು ತೇವಾಂಶ ಭರಿತ ಕಾಡಿನಲ್ಲಿ ಇದೇ ಜಾತಿಯ ಇನ್ನೊದು ಗುರಿಗೆ ಇದೆ. ಅದು ಹೂ ಬಿಡುವುದ ಎಂಟು ವರ್ಷಕ್ಕೊಮ್ಮೆ. ಮಳೆ ಕಡಿಮೆ ಬೀಳುವ ಕಾಡಿನಲ್ಲಿ ಮಣ್ಣು ಫಲವತ್ತಾಗಲೂ ಸಮಯಬೇಕಲ್ಲವೇ?


ಹನ್ನೆರಡು ವರ್ಷಕ್ಕೊಮ್ಮೆ ಹೂ ಬಿಡುವ "ಕುರುಂಜಿ"ಯ ಬಗ್ಗೆ ಕೇಳಿರಬಹುದು. ಅದೂ ಸಹ ಈ ಗುಂಪಿನ ಸಸ್ಯವೇ. ಮುನ್ನಾರ್ ನಂತಹ ತೀರ ಇಳಿಜಾರಿನ ಹುಲ್ಲು ಗಾವಲಿನಲ್ಲಿ ಬೆಳೆಯುವ ಸಸ್ಯ.ಬಿದಿರು ಬೆಳೆಯುವುದು ಎಲೆ ಉದುರಿಸುವ ಕಾಡಿನಲ್ಲಿ. ಅಲ್ಲಿ ಸಾಮಾನ್ಯವಾಗಿ ಬೀಳುವ ಮಳೆ 2000 ಮೀ.ಮೀ ಗಿಂತ ಕಡಿಮೆ. ಕಡಿಮೆ ನೀರನ್ನು ಉಪಯೋಗಿಸಿಕೊಂಡು ಬೂಮಿಯನ್ನು ಫಲವತ್ತ ಮಾಡುವ ಜವಾಬ್ದಾರಿ ಅವಕ್ಕೆ. ಹಾಗಾಗಿ 45 ರಿಂದ 60 ವರ್ಷದವೆರೆಗೆ ಹೂ ಬಿಡುವ ಬಿದಿರುಗಳಿವೆ.

ಎಲೆ ಉದುರಿಸಿ, ತಮ್ಮ ಮುಳ್ಳುಗಳಿಂದ ಬೇಲಿ ಮಾಡಿ ಮೊಳಕೆಯೊಡೆಯುತ್ತಿರುವ ಇತರ ಸಸ್ಯಗಳ ಚಿಗುರುಗಳನ್ನು ಸಂರಕ್ಷಿಸುತ್ತಿದ್ದವು, ತನ್ನ ಕರ್ತ್ವವ್ಯ ಮುಗಿಯಿತೆಂದು ಹೊರಟರೆ, ಮನುಷ್ಯ ಗೀಚುವ ಒಂದು ಬೆಂಕಿ ಕಡ್ಡಿ ಅಷ್ಟೆಲ್ಲ ವರ್ಷದ ಪ್ರಯತ್ನ ವ್ಯರ್ಥಮಾಡಿಬಿಡುತ್ತವೆ.

ಛಲಬಿಡದ ನಿಸರ್ಗ ಮತ್ತೆ ಬಿದಿರನ್ನೇ ಬೆಳೆಸಲು ಪ್ರಾರಂಭಿಸುತ್ತದೆ.
15 comments:

ಸಿಮೆಂಟು ಮರಳಿನ ಮಧ್ಯೆ said...

ಲೇಖನ,
ಅದಕ್ಕೆ ಪೂರಕವಾಗಿ ಫೋಟೊಗಳು..

ಎಲ್ಲವೂ ಚೆನ್ನಾಗಿವೆ...

ಅಭಿನಂದನೆಗಳು...

mahabaleshwar said...

Nice article...I knew the conecpt..but I was not knowing when exactly it happens. Then who had preapred that Bamboo grain rice...?Nice photos..


Waiting for next one....!

PARAANJAPE K.N. said...

ಫೋಟೋ ಲೇಖನ ಚೆನ್ನಾಗಿದೆ. ಬಿದಿರು ಹೂ ಬಿಟ್ಟರೆ ಬರಗಾಲ ಬರುತ್ತೇ೦ತ ನ೦ಬಿಕೆ ಇದೆಯಲ್ವಾ, ನಿಜವಿರಬಹುದಾ ?

PARAANJAPE K.N. said...

ಅ೦ದ ಹಾಗೆ ನನ್ನದು ಒ೦ದು ಬ್ಲಾಗಿದೆ, ಒಮ್ಮೆ ಭೇಟಿ ಕೊಡಿ, Follower ಆದರೆ ಸ೦ತೋಷ. ನಾನು ನಿಮ್ಮ ಬ್ಲಾಗ್ follow ಮಾಡ್ತೇನೆ
www.nirpars.blogspot.com

ಬಾಲು ಸಾಯಿಮನೆ said...

ಧನ್ಯವಾದಗಳು , ಪ್ರಕಾಶ ಹೆಗಡೆಯವರೆ,
ನಿಮ್ಮ ಬರವಣಿಗೆಯ ಶೈಲಿ ಚನ್ನಾಗಿದೆ. ನಾಗೆಂದ್ರ ಮುತ್ಮುರಡು ನಿಮ್ಮ ಬಗ್ಗೆ ಹೇಳಿದ್ದರು.
ನಿಮ್ಮ, ಬಾಲು

ಪರಾಂಜಪೆಯವರೆ,
ಇಲಿಗಳ ಸಂಖ್ಯೆ ಹೆಚ್ಚಾಗಿರುವುದು ಈಶಾನ್ಯ ಬಾರತದಲ್ಲಿ ವರದಿಯಾಗಿದೆ. ಹಾಗಾಗಿ ಶೇ 48 ಪ್ರತಿಶತ ಬೆಳೆ ಹಾನಿ ಆಗಿದೆ ಎಂದು ಅಧ್ಯಯನ ಒಂದು ವರದಿ ಮಾಡಿದೆ. ಅದೂ ಬರಗಾಲ ತಾನೆ?
ನಿಮ್ಮ ಬ್ಲಾಗ ನೋಡಿದ್ದೇನೆ. ಚನ್ನಾಗಿದೆ. follow ಮಾಡಲು ಬರಲಿಲ್ಲ.
ಧನ್ಯವಾದಗಳು.

shivu said...

ಬಾಲುಚಂದ್ರರವರೆ,

ನಾನು ಶಿವು ನಿಮ್ಮನ್ನು ಮತ್ಮರ್ಡುನಲ್ಲಿ ನಾಗೇಂದ್ರನ ಮನೆಯಲ್ಲಿ ಬೇಟಿಯಾಗಿದ್ದೆ. ಈಗ ನಿಮ್ಮ ಬ್ಲಾಗಿಗೆ ಬಂದಿದ್ದೇನೆ. ನಿಮ್ಮ ಬಿದಿರಿನ ಲೇಖನ ತುಂಬಾ ಉಪಯುಕ್ತ ಮಾಹಿತಿಯನ್ನು ಹೊಂದಿದೆ...ಎಲ್ಲಾ ಅಂಕಿ ಅಂಶಗಳ ಸಮೇತ ವಿಚಾರಗಳನ್ನು ಚೆನ್ನಾಗಿ ಹೇಳಿದ್ದೀರಿ....ಫೋಟೋಗಳು ಚೆನ್ನಾಗಿವೆ... ಅಭಿನಂದನೆಗಳು...

ನನ್ನ ಬ್ಲಾಗಿಗೂ ಬೇಟಿಕೊಡಿ..

http://chaayakannadi.blogspot.com/

Anonymous said...

ಫೋಟೋ, ಲೇಖನ ಎರಡೂ ಮಾಹಿತಿ ಮತ್ತು ಮುದ ನೀಡಿವೆ, ಧನ್ಯವಾದಗಳು!

ರಾಜೇಶ್ ನಾಯ್ಕ said...

ಒಳ್ಳೆಯ ಮಾಹಿತಿಪೂರ್ಣ ಲೇಖನ. ಆ ಒಂಟಿ ಆನೆಯ ಚಿತ್ರಕ್ಕೆ ಮಾರುಹೋಗಿದ್ದೆ. ಈ ಲೇಖನ ಪ್ರಕೃತಿಯ ಸಹಜ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದೆ. ಈ ಸಹಜ ಪ್ರಕ್ರಿಯೆಯ ನೆಪವೊಡ್ಡಿ ಅರಣ್ಯ ಇಲಾಖೆ ಬಿದಿರು ಕಡಿಯುವುದು ಮಾತ್ರ ನಾಚಿಕೆಗೇದು.

ಪ್ರಮೋದ ನಾಯಕ said...

ಒಳ್ಳೆಯ ಲೇಖನ. ಹೌದು ನಾವು ಚಿಕ್ಕಂದಿನಲ್ಲಿ ಈ ಪ್ರಕ್ರಿಯೆಯ ಬಗ್ಗೆ ಕೇಳಿದ್ದೆವು. ಆದರೆ ಅದರ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಸವಿವರವಾದ ಲೇಖನ.

rajshekhar said...

very good photos. writeup also interesting.welldone. now a days blogs like these are our neccesity. pls continue it. good luck.

-Rajashekhar Hegde

ಸಿಂಧು Sindhu said...

ಪ್ರಿಯ ಬಾಲು,

ಲೇಖನ ತುಂಬ ಚೆನ್ನಾಗಿ ಬಂದಿದೆ. ಇದೊಂದೆ ಅಲ್ಲ ಎಲ್ಲವನ್ನೂ ಓದಿದೆ. ತುಂಬ ಆಸಕ್ತಿದಾಯಕವಾಗಿ ಬರೆದಿದ್ದೀರ. ಈ ಬ್ಲಾಗ್ ಕೊಂಡಿಯನ್ನ ಮಿತ್ರ ರಾಜೇಶ್ ನಾಯಕರ ಬ್ಲಾಗ್ ನಿಂದ ಪಡೆದೆ.
ಲೇಖನಕ್ಕೆ ಪೂರಕವಾಗಿ ಸೊಗಸಾದ ಫೋಟೋ ಹಾಕುತ್ತಿದ್ದೀರಿ. ದಾಂಡೇಲಿಯ ಕಾಡಿನ ಬದಿಗೂ ಓಡಾಡಿಲ್ಲ ನಾನು. ಆದರೆ ಆ ಕಾಡುಗಳ ಸೊಬಗನ್ನ ನಿಮ್ಮ ಅಭಿವ್ಯಕ್ತಿಯಲ್ಲಿ ನೇರನೋಡಿದ ಅನುಭವ ಕೊಡುತ್ತಿದ್ದೀರಿ. ವಂದನೆಗಳು.

ಪ್ರೀತಿಯಿಂದ
ಸಿಂಧು

ಸಾಗರದಾಚೆಯ ಇಂಚರ said...

ಬಾಲು ಸರ್,
ಸುಂದರ ಫೋಟೋ, ಅಂದದ ವಿವರಣೆ
ಬಹಳಷ್ಟು ತಿಳಿದುಕೊಂಡೆ ನಿಮ್ಮ ಲೇಖನದಿಂದ,
ಹೀಗೆಯೇ ತಿಳಿಸುತ್ತಿರಿ

sowmya said...

wonderful....... nan saha bidhirina thindi thindhidde... very test fully.

Anonymous said...

Thank you, for all your valuable comments!

ದಿವ್ಯಾ said...

ಬಾಲು ಅವರೇ,
ದಾಂಡೇಲಿ ಬಗ್ಗೆ ನಿಮ್ಮ ಲೇಖನ ನೋಡಿ ಖುಷಿ ಆಯ್ತು.....
ನನ್ನ ಮನೆ ಅಲ್ಲೇ ಇರುವುದರಿಂದ ಮನೆ ನೆನಪೂ ಆಯಿತು.. :(
ಒಳ್ಳೇ ಫೋಟೋಗಳು..